ಕೂಡ್ಲಿಗಿ, ಏ.15- ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ ಅವರು ಪಟ್ಟಣದ ಅಂಬೇಡ್ಕರ್ ಸರ್ಕಲ್ನಲ್ಲಿ ಸಂವಿಧಾನದ ಪೀಠಿಕೆಯನ್ನು ವಾಚನ ಮಾಡಿ, ಭಾಗವಹಿಸಿದ ಎಲ್ಲಾ ಪ್ರಜೆಗಳಿಗೂ ಪ್ರತಿಜ್ಞೆ ಮಾಡಿಸಿದರು. ಸಿಪಿಐ ವಸಂತ ಅಸೋದೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗಳನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸರಕಾರದ ಯೋಜನೆಗಳನ್ನು ಯುವಕರು ಸದುಪಯೋಗಪಡಿಸಿಕೊಂಡು ಶಾಲಾ-ಕಾಲೇಜುಗಳ ಮೆಟ್ಟಿಲೇರ ಬೇಕು. ಸಮಾಜದ ಅಭಿವೃದ್ಧಿಗೆ ಕಂಕಣಬದ್ಧರಾಗಿರಬೇಕೆಂದು ಕರೆ ನೀಡಿದರು.
December 25, 2024