ದಾವಣಗೆರೆ, ಏ.14- ರಾಜ್ಯ ರೈಲ್ವೆ ಇಲಾಖೆಯ ಎಡಿಜಿಸಿ ಭಾಸ್ಕರ್‍ರಾವ್‍ರವರು ಕುಟುಂಬ ಸಮೇತರಾಗಿ ನಗರದ ರಾಂ ಅಂಡ್ ಕೋ ವೃತ್ತದ ಬಳಿಯಿರುವ ಮುದೇಗೌಡ್ರು ವಿಶ್ವನಾಥ್ ಅವರ ನಿವಾಸಕ್ಕೆ ಇಂದು ಆಗಮಿಸಿದ್ದರು. ಮುದೇಗೌಡ್ರು ವಿಶ್ವನಾಥ್ ಕುಟುಂಬ ವರ್ಗದವರು ಭಾಸ್ಕರ್‍ರಾವ್ ದಂಪತಿಯನ್ನು ಸತ್ಕರಿಸಿ, ಗೌರವಿಸಿದರು. ಈ ಸಂದರ್ಭದಲ್ಲಿ ಮಲ್ನಾಡವಾಣಿ ಸಂಪಾದಕ ಕೆ. ಏಕಾಂತಪ್ಪ, ಬಿಜೆಪಿ ಮುಖಂಡ ಎನ್.ಜಿ. ಪುಟ್ಟಸ್ವಾಮಿ, ಕಿರಣ್ ವಾಲಾವಲ್ಕರ್, ನಿವೃತ್ತ ಇಂಜಿನಿಯರ್ ಆನಂದಪ್ಪ, ನಗರಸಭೆ ಮಾಜಿ ಸದಸ್ಯ ನಿಂಗಪ್ಪ, ವಕೀಲರಾದ ಜಗದೀಶ್, ಡಾ. ನಾಡಿಗರ್ ರಾಜಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
December 28, 2024