ದಾವಣಗೆರೆ, ಏ. 14- ಶೋಷಿತರಿಗೆ ಗಟ್ಟಿ ಧ್ವನಿ ನೀಡಿದ ಆರಾಧ್ಯ ದೈವರಾಗಿ ಇಂದಿಗೂ ಎಂದೆಂದಿಗೂ ಪೂಜೆಸಲ್ಪಡುವ ಬಸವ, ಬುದ್ದ, ಅಂಬೇಡ್ಕರ್ ಮಹಾನ್ ಚೇತನಗಳು ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ತಿಳಿಸಿದರು.
ಅವರು ಅಂಬೇಡ್ಕರ್ ಜಯಂತಿಯಂದು ಜಯದೇವ ಸರ್ಕಲ್ ಹಿಂಭಾಗ ರಾಜ್ಯಾಧ್ಯಕ್ಷ ಟಿ.ಬಸವರಾಜ್ ಸಾರಥ್ಯದ ರಾಜ್ಯ ದಲಿತ ಸೇನಾ ಸಮಿತಿಯ ಕೇಂದ್ರ ಕಛೇರಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶೋಷಿತರಿಗೆ, ಅನಾಥರಿಗೆ, ಅಬಲೆಯರಿಗೆ ರಕ್ಷಣೆ ನೀಡುವಲ್ಲಿ ದಲಿತ ಸೇನಾ ಸಮಿತಿ ರಾಜ್ಯಾಧ್ಯಕ್ಷ ಟಿ.ಬಸವರಾಜ್ ರವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ದಲಿತ ಮುಖಂಡ ಆಲೂರು ನಿಂಗರಾಜ್, ಪಾಮೇನಹಳ್ಳಿ ನಾಗಣ್ಣ, ಕೇಶವಮೂರ್ತಿ, ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಮೋಹನ್ ಕುಮಾರ್, ಬಿಜೆಪಿ ಯುವ ಮುಖಂಡ ಅಣಜಿ ಬಸವರಾಜ್, ಆಟೋ ಚಾಲಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.