ದಾವಣಗೆೆರೆ, ಏ.14 – ಇಂದು ಸಂಜೆ ನಗರದಲ್ಲಿ ಮಳೆ ಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಎದುರುಗಡೆ ಇರುವ ಅಂಡರ್ ಬ್ರಿಡ್ಜ್ ನ್ನು ಮೇಯರ್ ಎಸ್. ಟಿ. ವೀರೇಶ್ ಅವರು ವೀಕ್ಷಿಸಿ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಗಮನಿಸಿ, ಸ್ವತಃ ತಾವೇ ಕಸವನ್ನು ತೆಗೆದು ನಾಳೆ ಅಧಿಕಾರಗಳ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು. ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್, ಯುವ ಬಿಗ್ರೇಡ್ನ ಪವನ್, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
April 18, 2025