ದಾವಣಗೆರೆ, ಏ.14 – ಅಂಬೇಡ್ಕರ ಯುವಕರ ಸಂಘದಿಂದ ಶಾಮನೂರಿನಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಶಾಮನೂರಿನ ಪ್ರಮುಖ ಬೀದಿಗಳಲ್ಲಿ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರ ಭಾವಚಿತ್ರಗಳನ್ನು ಡೊಳ್ಳು ಬಾರಿಸುತ್ತಾ ಭವ್ಯವಾಗಿ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಧನ್ಯಕುಮಾರ್, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಮಾನತೆಯ ಹರಿಕಾರರಾಗಿದ್ದಾರೆ. ಸರ್ವರ ಹಿತಕ್ಕಾಗಿ ವಿಶ್ವ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.
ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್ ಮಾತನಾಡಿ, ದೇಶದ ಮಹಾನ್ ನಾಯಕ ಅಂಬೇಡ್ಕರ್ ಅವರ ಜಯಂತಿಯನ್ನು ಯುವಕರು ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತಸ ತಂದಿದೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳುವಂತೆ ಮನವಿ ಮಾಡಿದರು.
ದಲಿತ ಮುಖಂಡ ಕಣ್ಣಾಳ್ ಅಂಜಿನಪ್ಪ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡುವ ಮೂಲಕ ನಮ್ಮೆಲ್ಲರಿಗೂ ಬದುಕುವ ಹಕ್ಕು ನೀಡಿದ್ದಾರೆ. ಒಂದು ವರ್ಗಕ್ಕೆ ಮಾತ್ರ ಅವರ ಸಂವಿಧಾನ ನೀಡಿಲ್ಲ, ಎಲ್ಲರ ಶ್ರೇಯಸ್ಸು ಅದರಲ್ಲಿ ಅಡಗಿದೆ. ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದಾರೆ ಎಂದು ಬಣ್ಣಿಸಿದರು.
ದೊಡ್ಡಮನಿ ಸುರೇಶ್, ಕುಂಬಪ್ಪರ ರಾಜಪ್ಪ, ದೊಡ್ಡಮನಿ ದಾನಪ್ಪ, ಓಬ್ಬಜ್ಜರ ಬಸವರಾಜಪ್ಪ, ಬೆಳಕೆರೆ ಜಯಪ್ಪ, ವಿಸ್ಮಯವಾಣಿ ಸಂಪಾದಕ ಡಾ.ಬಿ.ವಾಸುದೇವ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.