ದಾವಣಗೆರೆ, ಫೆ.10 – ಮುಂಗಡ ಪತ್ರ 2021-2022 ರ ವಿಶ್ಲೇಷಣಾ ಕಾರ್ಯಕ್ರಮವು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.
ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ ಆದ ಕಲಾನಿಕಾಯ ಡೀನ್ ಪ್ರೊ. ಕೆ.ಬಿ. ರಂಗಪ್ಪ ಅವರು ಮುಂಗಡ ಪತ್ರ ಕುರಿತಂತೆ, ಈ ಕೊರೊನಾ ಸಮಯದಲ್ಲಿ ಆರೋಗ್ಯ ಕ್ಷೇತ್ರದ ಕಡೆಗೆ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ ಹಾಗೆಯೇ ಎಲ್ಲರೂ ನಿರೀಕ್ಷೆ ಮಾಡಿದಂತಹ ಆರೋಗ್ಯ ಕ್ಷೇತ್ರ ಹಾಗೂ ಎಲ್ಲರೂ ನಿರೀಕ್ಷೆ ಮಾಡಿದಂತಹ ಮೂಲಭೂತ ಸೌಕರ್ಯದ ಕಡೆ ಗಮನಹರಿಸಿರುವುದರ ಬಗ್ಗೆ ಮತ್ತು ಕೈಗಾರಿಕೆಗಳಿಂದ ದೇಶದ ಅಭಿವೃದ್ಧಿಗೆ ಅನುಕೂಲ ಹಾಗೂ ಉದ್ಯೋಗವು ಸೃಷ್ಟಿಯಾಗಬಹುದು ಎಂದು ಹೇಳುತ್ತಾ ಇಂದಿನ ಬಜೆಟ್ 34,83,236 ಕೋಟಿ ಕಳೆದ ವರ್ಷಕ್ಕಿಂತ 14.5% ರಷ್ಟು ಹೆಚ್ಚು ಕಂಡಿರುವುದರ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ತೂ.ಕ.ಶಂಕ್ರಯ್ಯ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್. ತಿಪ್ಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಭೀಮಣ್ಣ ಸುಣಗಾರ್, ಡಾ.ಜಿ.ಎಂ.ದಿನೇಶ್, ಡಾ.ಶಾಂತಕುಮಾರಿ, ಐಕ್ಯೂಎಸಿ ಸಂಚಾಲಕ ಪ್ರೊ. ಟಿ.ವೀರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.