ಮಲೇಬೆನ್ನೂರು, ಫೆ. 10 – ವಿನಾಯಕ ನಗರ ಕ್ಯಾಂಪ್ ಸಮೀಪ ಇರುವ ಬಯಲು ಪ್ರದೇಶದಲ್ಲಿ ಜಿಗಳಿಯ ಮಿತ್ರ ಕ್ರಿಕೆಟರ್ ವತಿಯಿಂದ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಎರಡು ದಿನಗಳು ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಮಾಜಿ ಶಾಸಕ ಬಿ.ಪಿ. ಹರೀಶ್ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು. ಮಿತ್ರ ಕ್ರಿಕೆಟರ್‌ನ ಡಿ.ಕೆ. ಬಸವರಾಜ್ (ತಮ್ಮಿ) ಭಾನುವಳ್ಳಿ ಶಿವು, ಜಿ.ಬೇವಿನಹಳ್ಳಿಯ ಗದಿಗೇಶ್, ಕೀರ್ತಿ (ಪಾರ್ಥ) ಜಿ.ಎಸ್. ವಿಜಯಕುಮಾರ್ ಈ ವೇಳೆ ಹಾಜರಿದ್ದರು.
April 16, 2025