ಸಾರಿಗೆ ನೌಕರರ ಪತ್ನಿಯರಿಂದ ತಹಶೀಲ್ದಾರ್‌ಗೆ ಮನವಿ

ಹರಿಹರ, ಏ.12- ನಗರದ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ಸಾರಿಗೆ ನೌಕರರನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಸಾರಿಗೆ ನೌಕರರ ಪತ್ನಿಯರು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಅರ್ಪಿಸಿದರು.

ಶೀಲಾ ಹಿರೇಮಠ್ ಮಾತನಾಡಿ ನಮ್ಮ ಮನೆಯವರು ಸಾರಿಗೆ ಇಲಾಖೆ ನೌಕರರಾಗಿ ಸೇವೆ ಮಾಡುತ್ತಿದ್ದು, ಮೂರು ತಿಂಗಳು ಕಳೆದರೂ ಭರವಸೆಗಳು ಅಪೂರ್ಣವಾಗಿದ್ದರಿಂದ ಕಳೆದ ನಾಲ್ಕು ದಿನಗಳಿಂದ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ಮಾಡುತ್ತಿದ್ದಾರೆ. ಸ್ಥಳೀಯ ವ್ಯವಸ್ಥಾಪಕರು ಅವಾಚ್ಯ ಶಬ್ದ ಬಳಸುತ್ತಿದ್ದು, ನಮ್ಮ ಮನೆಗಳಿಗೆ ಪೊಲೀಸ್ ಜೀಪಿನಲ್ಲಿ ಬಂದು ದೌರ್ಜನ್ಯ ನಡೆಸುತ್ತಿದ್ದಾರೆ. ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗದಿದ್ದರೆ ನೀರು ಸಿಗದ ಸ್ಥಳಕ್ಕೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ಸತೀಶ್, ಚಂಪಕಾವತಿ, ರವಿ ಸಾವಕ್ಕನವರ್, ಶ್ರೀಹರಿ, ಚಂದ್ರಪ್ಪ, ನಾಗರತ್ನ, ಶೀಲಾ ಹಿರೇಮಠ, ಶ್ರೀಲತಾ, ರೇಣುಕಾ, ನಾಜೀಮಾ, ವೀಣಾ, ಮಧು, ಆಶಾ,  ಇಂದಿರಾ, ಸವಿತಾ, ಪವಿತ್ರಾ, ಇನ್ನಿತರರು ಹಾಜರಿದ್ದರು.

error: Content is protected !!