ಹೊಳೆಸಿರಿಗೆರೆ ಕ್ರಾಸ್ ಬಳಿ ರೈತ ಮುಖಂಡರ ಸಭೆ
ಮಲೇಬೆನ್ನೂರು, ಏ.11- ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ನೀಡಬೇಕೆಂದು ರೈತ ಸಂಘದ ಹಾಳೂರು ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹೊಳೆಸಿರಿಗೆರೆ ಕ್ರಾಸ್ ಬಳಿ ಕೆ.ಎನ್. ಹಳ್ಳಿ, ವಾಸನ, ಹೊಳೆಸಿರಿಗೆರೆ ಗ್ರಾಮಗಳ ರೈತರ ಸಮ್ಮುಖದಲ್ಲಿ ಸಭೆ ನಡೆಸಿದ ನಾಗರಾಜ್ ಅವರು ಸಾರಿಗೆ ನೌಕರರ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದರು.
ಸಾರಿಗೆ ನೌಕರರ ಮುಷ್ಕರದಿಂದಾಗಿ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ರಾಜ್ಯ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿ ಸುವುದು ಅನಿವಾರ್ಯವಾಗಿದೆ. ಆದರೆ ತಡಮಾಡುವು ದು ಬೇಡ ಎಂದು ನಾಗರಾಜ್ ತಿಳಿಸಿದರು.
ವಿ.ಟಿ. ನಾಗರಾಜ್, ಮಾಳನಾಯಕನಹಳ್ಳಿ ಗದಿಗೆಪ್ಪ, ವೆಂಕಟೇಶ್ ಮತ್ತಿತರರು ಸಭೆಯಲ್ಲಿದ್ದರು.