ಮರ್ಚೆಂಟ್ಸ್‌ ಕ್ಲಬ್‌ ನಿಂದ ಪಾಲಿಕೆ ಸದಸ್ಯ ಶಿವಪ್ರಕಾಶ್‌ಗೆ ಸನ್ಮಾನ

ದಾವಣಗೆರೆ,ಫೆ.8- ನಗರದ ಮರ್ಚೆಂಟ್ಸ್‌ ಕ್ಲಬ್‌ ವತಿಯಿಂದ ನಗರ ಪಾಲಿಕೆಯ 19ನೇ ವಾರ್ಡಿನ ಸದಸ್ಯ ಶಿವಪ್ರಕಾಶ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮರ್ಚೆಂಟ್ಸ್ ಕ್ಲಬ್ ಸುತ್ತಮುತ್ತ ಸ್ವಚ್ಛತೆ ಕಾಪಾಡಲು ಹಾಗೂ ಹಂದಿಗಳ ಹಾವಳಿಯನ್ನು ನಿವಾರಿಸುವಂತೆ  ಶಿವಪ್ರಕಾಶ್ ಅವರಿಗೆ ಮರ್ಚೆಂಟ್ಸ್‌ ಕ್ಲಬ್‌ನ ಪದಾಧಿಕಾರಿಗಳು ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕ್ಲಬ್‌ ಅಧ್ಯಕ್ಷ ಬಿ.ವಿ. ಚಂದ್ರಶೇಖರ್‌, ಕಾರ್ಯದರ್ಶಿ ಗುರುಪ್ರಸನ್ನ ಪಟೇಲ್, ಎನ್‌.ಟಿ. ಷಣ್ಮು ಖಪ್ಪ ರೈಲ್ವೆ ಹುಂಡೇಕಾರ್, ನಿರ್ದೇಶಕ ಪ್ರಹ್ಲಾದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!