ಮಲ್ಲೇಬೆನ್ನೂರು, ಏ.9 – ಪಟ್ಟಣದಲ್ಲಿ ಗುರುವಾರ ಸಾಯಂಕಾಲ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪಿಎಸ್‍ಐ ವೀರಬಸಪ್ಪ, ಪುರಸಭೆ ಮುಖ್ಯಾಧಿಕಾರಿ ದಿನಕರ್ ಅವರು ಮಾಸ್ಕ್ ಧರಿಸದೇ ಸುತ್ತಾಡುವ ಜನರಿಗೆ ದಂಡ ಹಾಕಿ ಅರಿವು ಮೂಡಿಸಿದರು, ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಬರಬೇಡಿ, ಮಾಸ್ಕ್ ಹಾಕದವರಿಗೆ ಎಲ್ಲಾ ಕಡೆ ದಂಡ ಹಾಕಲು ಹೇಳಿದ್ದೇವೆ, ಕೊರೊನಾ ವೈರಸ್ ಮತ್ತೆ ಹೆಚ್ಚಾಗುತ್ತಿರುವುದರಿಂದ ಜನರು ಜಾಗೃತರಾಗಬೇಕೆಂದು ತಹಶೀಲ್ದಾರ್ ಹೇಳಿದರು.
ಈ ವೇಳೆ ಸುಮಾರು 40 ಜನರಿಂದ 4 ಸಾವಿರ ರೂ ದಂಡ ವಸೂಲಿ ಮಾಡಲಾಯಿತು. ದಂಡ ಹಾಕಿಸಿಕೊಂಡವರಿಗೆ ಮಾಸ್ಕ್ ನೀಡಿ ಕಳುಹಿಸಿದರು. ಪುರಸಭೆ ಅಧಿಕಾರಿಗಳಾದ ಉಮೇಶ್, ಗುರು ಪ್ರಸಾದ್, ನವೀನ್, ಎಎಸ್‍ಐ ಬಸವರಾಜಪ್ಪ ಈ ವೇಳೆ ಹಾಜರಿದ್ದರು.