ಸಾವಿಲ್ಲದ ಕವನ ಬರೆಯಬೇಕು

ಹೂವಿನಹಡಗಲಿ, ಫೆ.6- ಕವಿಗಳು ಪ್ರಸ್ತುತ ಕಾಲಘಟ್ಟದ ಮೇಲೆ ಬೆಳಕು ಚೆಲ್ಲುವ ಕಾಯಕವನ್ನು ಕವಿಗಳು ಮಾಡಬೇಕು, ಸಾವಿಲ್ಲದ ಕವನ ಬರೆಯಬೇಕು ಎಂದು ದಾವಣಗೆರೆಯ ಹಿರಿಯ ವಕೀಲ ರೇವಣ್ಣ ಬಳ್ಳಾರಿ ಹೇಳಿದರು. ಹೂವಿನಹಡಗಲಿಯಲ್ಲಿ ಬರಹಗಾರರ ರಾಜ್ಯ ಘಟಕದ ಉದ್ಘಾಟನೆಯನ್ನು ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ಉದ್ಘಾಟಿಸಿದರು. 

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಅಧ್ಯಕ್ಷ ಮಧು ನಾಯ್ಕ ಅವರಿಗೆ ಪದಗ್ರಹಣ ಮಾಡಿಸಿ, ಕವಿಗಳಿಗೆ ಕವಿತೆ ಎಂದರೆ ಮನಸು ಅರುಳತ್ತಲಿದ್ದು, ಸಮಾಜ ತಿದ್ದಲು ಅನುಭಾವದ ನುಡಿ ತುಂಬಿರಬೇಕು. ಕವಿತೆಗಳನ್ನು ಓದಿ ಹೋದರೆ ಸಾಲದು, ಬೇರೆ ಕವಿಗಳ ಕವಿತೆಗಳಿಗೆ ಕಿವಿ ಆಗಿ, ಆಗ ನೀವು ಕವನವನ್ನು ಇನ್ನು ಹೆಚ್ಚು ಉತ್ಕೃಷ್ಟವಾಗಿ ಕಾವ್ಯ ರಚಿಸಬಹುದು. ಸತತ ಹೆಚ್ಚು ಅಭ್ಯಾಸವಿದ್ದು, ಕಡಿಮೆ ಬರೆದು ಮುದ ನೀಡಿ ಬೆಳಗಬೇಕು ಎಂದು ಕಿವಿ ಮಾತು ಹೇಳಿದರು.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಮಾತನಾಡಿ, ಲೇಖನಿ ಖಡ್ಗಕ್ಕಿಂತ ಹರಿತವಾದುದು. ಎಷ್ಟೋ ಸರ್ಕಾರಗಳನ್ನು ಬೀಳಿಸಿದ್ದು, ನಿಮಗೆ ನಾವು ಸಹಕಾರಿ ಆಗಿ ಇರುತ್ತೇವೆ. 50 ಮಾತುಗಳಿಗಿಂತ ಒಂದು ಲಿಖಿತ ವಾಕ್ಯ ಹೆಚ್ಚು ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಬಾರಾವಲಿ, ಚಂದ್ರಶೇಖರ್ ಹಡಪದ, ಲಲಿತಾ, ಪದ್ಮಜಾ, ನಿಸ್ಸಾರ್ ಮತ್ತಿತರರು ಭಾಗವಹಿಸಿದ್ದರು.  

error: Content is protected !!