ಮಲೇಬೆನ್ನೂರು, ಫೆ.6- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಅವರನ್ನು ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಭೇಟಿ ಮಾಡಿ ಸರ್ಕಾರಿ ಪಡಿತರ ವಿತರಕರ ಕುಂದುಕೊರತೆಗಳ ಕುರಿತು ಮನವಿ ಮೂಲಕ ಗಮನ ಸೆಳೆಯಲಾಯಿತು.
ಪಡಿತರ ವಿತರಕರಿಗೆ ಬಾಕಿ ಇರುವ ಕಮೀಷನ್ ಬಿಡುಗಡೆ ಮಾಡುವಂತೆ ಮತ್ತು ಬರುವ ಬಜೆಟ್‌ನಲ್ಲಿ ವಿತರಕರಿಗೆ ಕಮೀಷನ್ ಹೆಚ್ಚಿಸುವಂತೆ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಲಾಯಿತು.
ವಿಧಾನಸೌಧದಲ್ಲಿ ನಡೆದ ಸಚಿವರ ಭೇಟಿ ಸಂದರ್ಭದಲ್ಲಿ ರಾಜ್ಯ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಸಾಲಕಟ್ಟಿ ಹಾಲಸ್ವಾಮಿ, ಅಧ್ಯಕ್ಷ ಭಾನುವಳ್ಳಿ ಶಿವಾನಂದಪ್ಪ, ಕಾರ್ಯಾಧ್ಯಕ್ಷ ಕೃಷ್ಣ ಡಿ. ನಾಯಕ್, ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಗೌರವಾಧ್ಯಕ್ಷ ಎಸ್. ಸಿದ್ಧರಾಮಪ್ಪ, ಮಲೇಬೆನ್ನೂರಿನ ತಳಸದ ಬಸವ ರಾಜ್ ಸೇರಿದಂತೆ ಇನ್ನೂ ಅನೇಕ ಪಡಿತರ ವಿತರಕರು ಹಾಜರಿದ್ದರು.