ದಾವಣಗೆರೆ, ಫೆ. 4 – ನಗರದ ಲಕ್ಷ್ಮಿ ಲೇಔಟ್ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಲೇಔಟ್ ವೀಕ್ಷಣೆ ಕಾರ್ಯಕ್ರಮಕ್ಕೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಮತ್ತು ಸಿಬ್ಬಂದಿ ವರ್ಗದವರು ಆಗಮಿಸಿ, ಸೌಲಭ್ಯ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಲೇಔಟ್‍ನಲ್ಲಿ ಪಾರ್ಕ್, ರಸ್ತೆಗಳನ್ನು ಸರಿಪಡಿಸಲು ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳನ್ನು ಅಳವಡಿಸಲು ಭರವಸೆ ಕೊಟ್ಟರು.
ಲಕ್ಷ್ಮಿಲೇಔಟ್ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ತೆಲಿಗಿ ಮಂಜುನಾಥ್, ಅಧ್ಯಕ್ಷ ಹೆಚ್.ಎಸ್. ರಾಮಕೃಷ್ಣ, ಕಾರ್ಯದರ್ಶಿ ಜಯಣ್ಣ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಸವರಾಜ್ ಸಾಗರ್, ಕಾರ್ಯಾಧ್ಯಕ್ಷ ದುರುಗೇಶ್, ಗೌರವಾಧ್ಯಕ್ಷ ಸುಭಾಶ್ಚಂದ್ರ, ಉಪಾಧ್ಯಕ್ಷ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.