ಹರಪನಹಳ್ಳಿ, ಫೆ.3- ತಾಲ್ಲೂಕಿನ ಗಣಿತ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಅಧ್ಯಕ್ಷರಾಗಿ ತಿಪ್ಪೇರುದ್ರಪ್ಪ, ಉಪಾಧ್ಯಕ್ಷರಾಗಿ ಲತಾ ರಾಥೋಡ್, ಗೌರವ ಅಧ್ಯಕ್ಷರಾಗಿ ವಾಮದೇವಪ್ಪ, ಕಾರ್ಯದರ್ಶಿಯಾಗಿ ವೀರೇಂದ್ರ ತೋಟಗಾರ್, ಸಹಕಾರ್ಯದರ್ಶಿಯಾಗಿ ಎಂ.ಎನ್ ದಯಾನಂದ್, ಖಜಾಂಚಿಯಾಗಿ ನೇವಾರ ಲಿಂಗರಾಜ್, ವಲಯವಾರು ಸಂಘಟಕರಾಗಿ ಚಿಗಟೇರಿ ವಿಶ್ವನಾಥ್, ತೆಲಗಿ ಗೌಡ್ರು ವಿಜಯ, ಪಟ್ಟಣದ ಸುಮಿತ್ರ ನುಲಿ, ಅರಸೀಕರೆ ಗುರುರಾಜ್, ಗೌರವ ಸಲಹೆಗಾರರಾಗಿ ಕೆ.ದಯಾನಂದ್, ಗಣೇಶ್, ಮಾಧ್ಯಮ ಪ್ರತಿನಿಧಿಗಳಾಗಿ ಎನ್.ಜಿ. ಮನೋಹರ್, ಲತಾ ರಾಥೋಡ್, ತಾಂತ್ರಿಕ ಸಲಹೆಗಾರರಾಗಿ ಪ್ರದೀಪ್ ಕುಮಾರ್, ಬರವಣಿಗೆ ಗಾರರಾಗಿ ಬಿ.ಎಸ್. ಪವಿತ್ರ, ಕೆ.ಟಿ.ಲತಾ, ಗಣೇಶ್, ಮಂಜುನಾಥ್, ಮಧೂಸೂದನ್ ಅವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ನೋಡಲ್ ಅಧಿಕಾರಿ ಮಹೇಶ್ ಪೂಜಾರ್ ತಿಳಿಸಿದ್ದಾರೆ.
December 27, 2024