ದಾವಣಗೆರೆ, ಫೆ.2- ನಗರ ಮತ್ತು ಗ್ರಾಮಾಂತರ ಪಡಿತರ ವಿತರಕರ ಸಂಘದ ವಾರ್ಷಿಕ ಮಹಾಸಭೆ ಈಚೆಗೆ ನಡೆಯಿತು. ಕಾರ್ಯಕ್ರಮವನ್ನು ಜಂಟಿ ನಿರ್ದೇಶಕ ಮಂಟೆಸ್ವಾಮಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಜಿ.ಡಿ. ಗುರುಸ್ವಾಮಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಗಿರೀಶ್, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಚಂದ್ರಶೇಖರ್, ಲಯನ್ಸ್ ಕ್ಲಬ್ ಉಪಾಧ್ಯಕ್ಷ ಎಸ್. ಓಂಕಾರಪ್ಪ, ಪ್ರಕಾಶ್, ವೆಂಕಟೇಶ್ ನಾಯಕ್, ಎನ್.ಆರ್. ರವಿ, ಬಿ.ಆರ್. ವೀರಣ್ಣ, ಬಿ.ಎಸ್. ಭರಮಣ್ಣ ಮಳಲ್ಕೆರೆ, ರವಿಕುಮಾರ್ ಬಾಡ, ಗಂಗಾಧರ ಹೊನ್ನೂರು ಭಾಗವಹಿಸಿದ್ದರು. ಕೆ.ಆರ್. ಗಂಗರಾಜ್, ಎಂ.ಎನ್. ನಾಗರಾಜ್, ಅಲ್ತಾಫ್, ಸದಣ್ಣ ಮಳಲ್ಕೆರೆ ಮತ್ತಿತರರು ಆಗಮಿಸಿದ್ದರು.