ದಾವಣಗೆರೆ,ಏ.4- ಜಿಲ್ಲೆಯ ಜೈನ್ ಸಮಾಜ ಬಾಂಧವರಿಗಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಜೈನ್ ದವನ್ ವಾರಿಯರ್ಸ್ ತಂಡ ಪ್ರಥಮ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು.
ಸ್ಥಳೀಯ ಜೈನ್ ಸಂಸ್ಕಾರ ಇಲೆವೆನ್ ದ್ವಿತೀಯ ಸ್ಥಾನ ಪಡೆಯಿತು.
ನಗರದ ಜೈನ್ ಫ್ರೆಂಡ್ಸ್ ಗ್ರೂಪ್ ವತಿಯಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಜೈನ್ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿತ್ತು. ಈ ಪಂದ್ಯಾವಳಿಯಲ್ಲಿ ಜಿಲ್ಲೆಯ 12 ಜೈನ್ ತಂಡಗಳಿಂದ 180 ಕ್ರೀಡಾಪಟುಗಳು ಭಾಗವಹಿಸಿದ್ದರು.
ಜೈನ್ ದವನ್ ವಾರಿಯರ್ಸ್ ತಂಡದಲ್ಲಿ ನಾಯಕ ದಿನೇಶ್ ಜೈನ್, ಉಪ ನಾಯಕ ಸುನಿಲ್ ಜೈನ್, ಅಮಿತ್ ಜೈನ್, ಮುಖೇಶ್ ಜೈನ್, ಕುಮಾರಪಾಲ್ ಜೈನ್, ಸಂಜಯ್ ಜೈನ್, ಕಲ್ಪೇಶ್ ಜೈನ್, ದರ್ಶನ್ ಗಾಂಧಿ, ದರ್ಶನ್ ಕೊಠಾರೆ, ವಿಮಲ್ ಜೈನ್, ವಿಪಿನ್ ಜೈನ್, ಶ್ಯಾಂ ಜೈನ್, ರೇನಿಶ್ ಜೈನ್, ಪ್ರೀತೇಶ್ ಜೈನ್, ವಿಕಾಸ್ ಜೈನ್ ಅವರುಗಳಿದ್ದರು.
ಪ್ರಥಮ ಸ್ಥಾನ ಪಡೆದ ಜೈನ್ ದವನ್ ವಾರಿಯರ್ಸ್ ತಂಡಕ್ಕೆ ಪ್ರಾಯೋಜಕತ್ವ ವಹಿಸಿದ್ದ ದವನ್ – ನೂತನ್ ಅಲಿಯನ್ಸ್ ವತಿಯಿಂದ ದವನ್ ಕಾಲೇಜಿನ ಕಾರ್ಯ ದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯ ದರ್ಶಿ ಡಾ. ಜಿ.ಎಸ್. ಅಂಜು, ನಿರ್ದೇಶಕ ಹರ್ಷ ಗುಜ್ಜಾರ್ ಅಭಿನಂದಿಸಿದ್ದಾರೆ.