ದಾವಣಗೆರೆ, ಜ. 30- ದಾವಣಗೆರೆ ಕಲಾ ಪರಿಷತ್ತು (ಲಲಿತ ಕಲೆಗಳ ಶ್ರೇಯೋಭಿವೃದ್ಧಿ ಸಂಸ್ಥೆ) 2ನೇ ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ಕಲಾವಿದ ಎ. ಮಹಾಲಿಂಗಪ್ಪ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕಲಾ ಪರಿಷತ್‌ನಲ್ಲಿ ಶನಿವಾರ ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿದ್ದ ವಿವಿಧ ಬಗೆಯ 40ಕ್ಕೂ ಹೆಚ್ಚು ಕಲಾಕೃತಿಗಳು ನೋಡುಗರ ಮೆಚ್ಚುಗೆಗೆ ಪಾತ್ರವಾದವು. ಸಂಸ್ಕಾರ ಭಾರತಿ ಗೌರವ ಅಧ್ಯಕ್ಷ ಡಾ.ಆರ್.ಎಲ್. ಉಮಾಶಂಕರ್ ಪ್ರದರ್ಶನಕ್ಕೆ ಚಾಲನೆ ನೀಡಿದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ, ನಿವೃತ್ತ ಪ್ರಾಧ್ಯಾಪಕರೂ ಆದ ಬಿ.ಎಸ್. ಕೊರ್ತಿ, ದಾವಣಗೆರೆ ವಿವಿ ಕುಲ ಸಚಿವ ಡಾ.ಬಸವರಾಜ್ ಬಣಕಾರ್, ಕಲಾ ಪರಿಷತ್ ಅಧ್ಯಕ್ಷ ಆರ್.ಡಿ. ಬದರಿನಾಥ್, ಕಲಾ ಕುಂಚದ ಸಂಸ್ಥಾಪಕ ಗಣೇಶ ಶೆಣೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
December 26, 2024