ಹರಪನಹಳ್ಳಿಯಲ್ಲಿ ಎಸ್.ವಿ.ಆರ್
ಹರಪನಹಳ್ಳಿ, ಏ.4- ಬೇಸಿಗೆಯಲ್ಲಿ ಕ್ಷೇತ್ರದ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಸಮೀಪದ ಕೋಣನಕಟ್ಟೆ ಗ್ರಾಮದಲ್ಲಿ ಶುಕ್ರವಾರ ನೂತನ ಕೊಳವೆ ಬಾವಿಗೆ ನೀರು ಹರಿಸಿ ಅವರು ಮಾತನಾಡಿದರು.
ದಶಕಗಳಿಂದ ಸಮರ್ಪಕ ಮಳೆಗಾಲ ಇಲ್ಲದೆ ಕ್ಷೇತ್ರದ ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಆದರೆ ಕಾಲ ಬದಲಾಗಿದ್ದು ಜೂನ್ ತಿಂಗಳ ಒಳಗೆ ಕ್ಷೇತ್ರ ಸಮೃದ್ಧ ನೀರಾವರಿಯಿಂದ ಕೂಡಿರುವ ದಿನಗಳು ಸನ್ನಿಹಿತವಾಗಲಿವೆ ಎಂದರು. ಇದಕ್ಕೂ ಮೊದಲು ಗ್ರಾಮದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿ, ಶ್ರೀಮಂತರಿಗೆ ಸೀಮಿತವಾಗಿದ್ದ ಕ್ರಿಕೆಟ್ ಈಗ ಹಳ್ಳಿಗಳಿಗೂ ವ್ಯಾಪಿಸಿರುವುದು ಕ್ರೀಡಾಪಟುಗಳ ಉಗಮದ ವೇದಿಕೆಯಾಗಿದೆ ಎಂದು ತಿಳಿಸಿದರು.
ಜಿ.ಪಂ ಸದಸ್ಯ ಅಂಜಿನಪ್ಪ, ಮುಖಂಡರಾದ ಬಾಲೇನಹಳ್ಳಿ ಕೆಂಚನಗೌಡ, ಫಣಿಯಾಪುರ ಲಿಂಗರಾಜ, ಅಣ್ಣಪ್ಪ, ಟಿ.ಸುರೇಶ್, ಶ್ರೀನಿವಾಸ, ಪಾಂಡುರಂಗ, ನಾಗರಾಜ್, ಮಂಜುನಾಥ್, ಕೆ. ತಿರುಪತಿ, ಷಣ್ಮುಖಪ್ಪ, ಪರಶುರಾಮ, ಹಾಲಪ್ಪ ಮತ್ತಿತರರು ಇದ್ದರು.