ಹೊನ್ನಾಳಿಯಲ್ಲಿ ಕಾಲ್ನಡಿಗೆ ಜಾಥಾ

ಹೊನ್ನಾಳಿ, ಏ.4-  ಆಗಸ್ಟ್ 15 ಕ್ಕೆ ಸ್ವಾತಂತ್ರ್ಯ ಗಳಿಸಿ 75 ವರ್ಷ ತುಂಬು ತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ 75 ವಾರಗಳ ಕಾಲ  ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾಂಕೇತಿಕವಾಗಿ ಇಂದು ಬೆಳಿಗ್ಗೆ  ಕಾಲ್ನಡಿಗೆ ಜಾಥಾವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರವಾಸಿ ಮಂದಿರದಲ್ಲಿರುವ ಗಾಂಧೀಜಿ ಪ್ರತಿಮೆಗೆ ಹಾರ ಹಾಕುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ರೇಣುಕಾಚಾರ್ಯ, ಸ್ವಾತಂತ್ರ ಕೇವಲ ಹೋರಾಟ ಮಾಡಿದ್ದರಿಂದ ಬರಲಿಲ್ಲ. ಹಲವರ ಪ್ರಾಣ ತ್ಯಾಗ, ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರು. 

ಐಬಿಯಿಂದ ಜಾಥಾ ನಡೆಸಿ  ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ನಡೆದ ಸಭೆಯಲ್ಲಿ ಶಾಸಕ ಬಸವನಗೌಡ ಕೋಟೂರು,  ತಾ.ಪಂ. ಇಒ ಗಂಗಾಧರಮೂರ್ತಿ, ಪುರಸಭಾಧ್ಯಕ್ಷ ಕೆ.ವಿ. ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ ವೊಡ್ಡಿ, ಪುರಸಭಾ ಸದಸ್ಯ ಬಾಬು ಹೋಬಳದರ್, ಸಿಪಿಐ ದೇವರಾಜ್, ಬಿಇಒ ರಾಜೀವ್, ಜಿ.ಪಂ. ಎಇಇ ಅಜ್ಜಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ, ರವಿಕುಮಾರ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !!