ಹೂವಿನಹಡಗಲಿ, ಏ.4- ಹಿಂದೂ-ಮುಸ್ಲಿಂ ಬಾಂಧವರ ಸಾಮರಸ್ಯದ ಪ್ರತೀಕವಾಗಿ ಆಚರಣೆಗೊಳ್ಳುತ್ತಿರುವ ರಾಜಾಬಾಗ್ ಯಮನೂರು ಸ್ವಾಮಿ ಉರುಸು ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು.
ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಸೇರಿ ಆಚರಿಸುವ ಭಾವೈಕ್ಯತೆಯ ಈ ಹಬ್ಬದಲ್ಲಿ ಈ ಬಾರಿ ಕೊರೊನಾ ಸೋಂಕಿನಿಂದ ಸರಳವಾಗಿ ಹಡಗಲಿ ತಾಲ್ಲೂಕಿನ ಭಕ್ತರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಮೂಲಕ ಸಾಗಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ತರುವ ಪವಿತ್ರ ಗಂಗೆಯಲ್ಲಿ ದೀಪ ಉರಿಸುವ ಪವಾಡ ಕಾರ್ಯಕ್ರಮ ವಿಶೇಷವಾಗಿತ್ತು. ಸವಾಲ್ ಪದಗಳ ಖವ್ವಾಲಿ ಕಾರ್ಯಕ್ರಮ, ರಸಮಂಜರಿ ಕಾರ್ಯಕ್ರಮ, ಟಗರಿನ ಕಾಳಗ ಹಾಗೂ ಸಂಜೆಯ ಜಂಗೀ ಕುಸ್ತಿ ರದ್ದುಪಡಿಸಲಾಗಿದೆ.