ದಾವಣಗೆರೆ, ಏ. 4 – ಅತ್ಯಾಧುನಿಕ ನವೀಕೃತ ರೈಲ್ವೆ ನಿಲ್ದಾಣ ದಾವಣಗೆರೆ ಜಿಲ್ಲೆಗೊಂದು ಪ್ರವಾಸಿ ತಾಣದಂತಾಗಿದೆ ಎಂದು ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಹರ್ಷ ವ್ಯಕ್ತಪಡಿಸಿದರು. ನವೀಕೃತ ರೈಲ್ವೆ ನಿಲ್ದಾಣ ದ ಉದ್ಘಾಟನೆ ಸಂದರ್ಭದಲ್ಲಿ ನಡೆದ ಸೌಹಾರ್ದ ಕೂಟ ಸಮಾರಂಭದಲ್ಲಿ ಸಂಸದ ಜಿಎಂ.ಸಿದ್ದೇಶ್ವರ ಅವರಿಗೆ ಗೌರವಾರ್ಪಣೆ ಅರ್ಪಿಸಿದ ದಾವಣಗೆರೆ ಶೋಷಿತ ವರ್ಗಗಳ ಒಕ್ಕೂಟದ ಬಾಡದ ಆನಂದರಾಜ್ ನೇತೃತ್ವದಲ್ಲಿ ಸಂಸದರನ್ನು ಅಭಿನಂದಿಸಿದರು. ಸಿ.ವಿ. ನರೇಂದ್ರಕುಮಾರ್, ಬಾಬು, ಮುರುಳಿ ಯಾದವ್, ಮಂಜುನಾಯ್ಕ್, ಸಂತೋಷಕುಮಾರ್ ಮತ್ತಿತರರು ಇದ್ದರು.
December 27, 2024