ವಿಚಿತ್ರ ಆದರೂ ಸತ್ಯ
ಬಾಳೆ ಗಿಡಗಳನ್ನು ನೆಟ್ಟು ಮೊದಲು ಬಾಳೆ ಎಲೆ ಬಿಟ್ಟು ನಂತರ ಹೂ ಬಿಟ್ಟು ಬಾಳೆಗೊನೆ ಬಿಡುವುದು ಸಹಜ. ಸರ್ವೇ ಸಾಮಾನ್ಯ. ಆದರೆ ಕಡಿದ ಬಾಳೆ ದಿಂಡಿನಲ್ಲಿ ಬಾಳೆ ಎಲೆ ಬಿಡದೇ ಬಾಳೆಗೊನೆ ಬಿಟ್ಟಿದ್ದು ವಿಚಿತ್ರ ಆದರೂ ಸತ್ಯ.
ದಾವಣಗೆರೆ ಡಿ.ಸಿ.ಎಂ.ಟೌನ್‍ಶಿಪ್‍ನಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ದಸರಾ ಹಬ್ಬದಂದು ಸಾಮಾನ್ಯವಾಗಿ ಎಲ್ಲಾ ದೇವಿ ದೇವಸ್ಥಾನಗಳಲ್ಲಿ ಅಂಬು ಛೇದನಕ್ಕಾಗಿ ಬಾಳೆ ದಿಂಡನ್ನು ಹೂತು ಪೂಜೆ, ಪುನಸ್ಕಾರದ ನಂತರ ಅದನ್ನು ಕಡಿಯುವುದು ಒಂದು ಸಂಪ್ರದಾಯ, ವಾಡಿಕೆ.
ಅಕಾಲಿಕ ಮಳೆಯಿಂದಾಗಿ ಈ ಒಣಗಿದ ಬಾಳೆ ಕಂಬದಲ್ಲಿ ಬಾಳೆ ಎಲೆ ಬಿಡದೇ ನೇರವಾಗಿ ಬಾಳೆಗೊನೆ ಬಿಟ್ಟಿದ್ದು ವಿಶೇಷತೆ. ಅದರಲ್ಲೂ ಶ್ರೀ ಚೌಡೇಶ್ವರಿ ದೇವಿಯ ಎದುರೇ ಬಾಳೆಗೊನೆ ಬಗ್ಗಿ ನಮಿಸುವಂತೆ ಬಿಟ್ಟಿದ್ದು ಪವಾಡ ದೃಶ್ಯ ಪ್ರತಿದಿನ ನೂರಾರು ಭಕ್ತರು, ಅಧ್ಯಾತ್ಮ ಮನಸ್ಕರು ಅದಕ್ಕೆ ಹೂ ಇಟ್ಟು, ಪೂಜಿಸಿ ವಂದಿಸುವುದು ಆಸ್ತಿಕತೆಯ ಸಂಕೇತ, ಪ್ರತೀಕ.
ಚಿತ್ರ – ಬರಹ : ಸಾಲಿಗ್ರಾಮ ಗಣೇಶ್ ಶೆಣೈ, ದಾವಣಗೆರೆ.