ಜಿನ ಮಂದಿರದಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಏ.1 – ಪದ್ಮಾಂಭ ಮಹಿಳಾ ಸಮಾಜದ ವತಿಯಿಂದ ಭಗವಾನ್ ಆದಿನಾಥ ಜಿನ ಮಂದಿರದಲ್ಲಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು.

ದಿಗಂಬರ ಜೈನ ಸಮಾಜದ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಪದ್ಮಾಪ್ರಕಾಶ್, ಹರ್ಷ ನಾಗರಾಜ್, ಚೇತನಾ ಪದ್ಮರಾಜ್ ಅವರಿಗೆ ಸಾಧನಾ ಪ್ರಶಸ್ತಿ ನೀಡಲಾಯಿತು. ಕವಿತಾ ಧರಣೇಂದ್ರ ಅಧ್ಯಕ್ಷತೆ ವಹಿಸಿದ್ದರು. ಉಷಾ, ಜಯಪ್ರಕಾಶ್, ಮಮತ ಸಂಪತ್, ವರ್ಷ ಹುಲಿ, ಕುಸುಮಾ ಸುನೀಲ್, ಸುಷ್ಮ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!