ದಾವಣಗೆರೆ, ಜ.25 – ಹೊಸಪೇಟೆಯ ವಿಜಯನಗರ ಬಾಸ್ಕೆಟ್‍ಬಾಲ್ ಕ್ಲಬ್ ಇವರ ಆಶ್ರಯದಲ್ಲಿ ಮೊನ್ನೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‍ನ ಕ್ರೀಡಾಪಟುಗಳು ಮೂರು ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನರಾಗಿ ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
17 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಹಾಗೂ 14 ಮತ್ತು 17 ವರ್ಷದೊಳಗಿನ ಬಾಲಕಿಯರ ವಿಭಾಗಗಳಲ್ಲಿ ದಾವಣಗೆರೆ ಬಾಸ್ಕೆಟ್‍ಬಾಲ್ ಕ್ಲಬ್‍ನ ಕ್ರೀಡಾಪಟುಗಳು ಭಾಗವಹಿಸಿದ್ದರು.
17 ವರ್ಷದ ಬಾಲಕರ ವಿಭಾಗದಲ್ಲಿ ಬಿಜಾಪುರ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 14 ಮತ್ತು 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹೊಸಪೇಟೆ ತಂಡವನ್ನು ಮಣಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸಮಗ್ರ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‍ನ ಆಡಳಿತ ಮಂಡಳಿಯವರು ಹಾಗೂ ತರಬೇತುದಾರ ಆರ್. ವೀರೇಶ್ ಹಾಗೂ ಆರ್. ದರ್ಶನ್ ಪ್ರಶಸ್ತಿ ಪಡೆದ ಬಾಲಕ-ಬಾಲಕಿಯರಿಗೆ ಅಭಿನಂದಿಸಿದ್ದಾರೆ.