ದಾವಣಗೆರೆ, ಜ.24- ಮಹಾನಗರ ಪಾಲಿಕೆ ವ್ಯಾಪ್ತಿಯ 15ನೇ ವಾರ್ಡಿನ ಯಲ್ಲಮ್ಮ ನಗರದ ಸಾರ್ವಜನಿಕರಿಗೆ ನೀರಿನ ಬವಣೆ ಹೆಚ್ಚಾದ ಹಿನ್ನೆಲೆಯಲ್ಲಿ ನಗರ ಪಾಲಿಕೆಯಿಂದ ಕೊಳವೆ ಬಾವಿಯನ್ನು ಕೊರೆಸುವುದರ ಮೂಲಕ ನೀರು ಕೊಡಲಾಗಿದೆ. ಈ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಅವರು, ಬೋರ್‌ವೆಲ್ ಹಾಕಿಸಿ ಮನೆ-ಮನೆಗೆ ಪೈಪ್‌ಲೈನ್ ಹಾಕಿಸಿ, ನಲ್ಲಿ ಅಳವಡಿಸಿ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಪಾಲಿಕೆ ಸದಸ್ಯರಾದ ಆಶಾ ಮತ್ತು ಕಾಂಗ್ರೆಸ್ ಮುಖಂಡ ಉಮೇಶ್ ದಂಪತಿಯ ಸಾರ್ವಜನಿಕರ ಸೇವೆಯನ್ನು ಶ್ಲ್ಯಾಘಿಸಿರುವ ಸಮಾಜ ಸೇವಕರಾದ ಕೆ.ಎಂ.ವೀರಯ್ಯ ಸ್ವಾಮಿ ಅವರು, 15ನೇ ವಾರ್ಡ್‌ನ ಕೆಲವು ಭಾಗಗಳಲ್ಲಿರುವ ನೀರಿನ ಸಮಸ್ಯೆಗೆ ಕೊಳವೆ ಬಾವಿ ಹಾಕಿಸಲು ಕ್ರಮ ಕೈ ಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
January 9, 2025