ಮೂಳೆ ಸಾಂದ್ರತಾ ಪರೀಕ್ಷಾ ಶಿಬಿರ

ಕುಮಾರಪಟ್ಟಣಂ, ಜ.24- ಸ್ವಾಸ್ಥ್ಯ ಕ್ಲಿನಿಕ್ ವತಿಯಿಂದ ಉಚಿತ ಮೂಳೆ ಖನಿಜಾಂಶ ಸಾಂದ್ರತಾ ಪರೀಕ್ಷೆಯನ್ನು ಮೊನ್ನೆ ನಡೆಸಲಾ ಯಿತು. ಕ್ಲಿನಿಕ್ ಆವರಣದಲ್ಲಿ ನಡೆದ ಶಿಬಿರಕ್ಕೆ ಸರ್ವೋದಯ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಾಕನೂರು ಸತೀಶ್ ಪಿ. ಮಲ್ಲನಗೌಡ, ಪರಿಸರ ಪ್ರೇಮಿ ಡಾ. ಜಿ.ಜೆ. ಮೆಹಂದಳೆ ಉಪಸ್ಥಿತರಿದ್ದು ಮಾತನಾಡಿದರು. ಶಿಬಿರದ ರೂವಾರಿಗಳಾದ ಡಾ. ಜಿ.ಹೆಚ್. ಮಹಾಂತೇಶ್, ಡಾ. ಜ್ಯೋತಿ ಮಹಾಂತೇಶ್ ಶಿಬಿರ ನಡೆಸಿಕೊಟ್ಟರು.  ವೈದ್ಯಕೀಯ ಪ್ರತಿ ನಿಧಿ ಆನಂದ ಹಬ್ಬು, ಎಸ್.ಕೆ. ಸತೀಶ್, ಶ್ರೀನಿವಾಸಮೂರ್ತಿ ಸಹಕಾರ ನೀಡಿದರು. 

error: Content is protected !!