ಕುಂದುವಾಡ ಕೆರೆಯನ್ನು ಅಭಿವೃದ್ಧಿ ಹೆಸರಿನಲ್ಲಿ ಬರಿದು ಮಾಡಲಾಗಿದೆ. ಕೆರೆಯಲ್ಲಿನ ಹೂಳು ತೆಗೆಯಲಾಗುವುದು ಎಂದು ತಿಳಿಸಲಾಗಿದೆ. ನದಿ ನೀರು ಪೈಪ್ಗಳ ಮೂಲಕ ಬರುತ್ತಿರುವಾಗ ಹೂಳಿನ ಸಮಸ್ಯೆಯೇ ಇಲ್ಲ. ಬರಿದಾಗಿರುವ ಕೆರೆಯ ಮಧ್ಯೆ ಜನರು ಸೆಲ್ಪಿ ತೆಗೆಯುತ್ತಾ ಅಡ್ಡಾಡುತ್ತಿದ್ದಾರೆ. ಅದು ಮಣ್ಣಿನ ಗಟ್ಟಿ ನೆಲವಾಗಿದೆ. ಹೂಳು ಇದ್ದಿದ್ದರೆ ಕೆಸರಿನಲ್ಲಿ ಜನ ಸಿಲುಕಬೇಕಿತ್ತು. ಕೆರೆಯಲ್ಲಿ ಇಲ್ಲದ ಹೂಳು ತೆಗೆಯುವುದೇ ಅಭಿವೃದ್ಧಿಯೇ ?
– ಡಾ. ಎಸ್. ಶಿಶುಪಾಲ, ದಾವಣಗೆರೆ