ದಾವಣಗೆರೆ, ಜ.20 – ಕೊರೊನಾ ಮಹಾಮಾರಿ ಓಡಿಸಲು ಲಸಿಕೆ ನೀಡುವ ಕಾರ್ಯಕ್ಕೆ ನಗರದ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸರ್ಕಾರದ ಮಾರ್ಗಸೂಚಿ ಅನ್ವಯ ಆರಂಭದಲ್ಲಿ ಶೂಶ್ರುಷಕ ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ನಂತರ ಅನುಕ್ರಮವಾಗಿ ವೈದ್ಯಕೀಯ ವೃಂದಕ್ಕೆ ಲಸಿಕೆ ಹಾಕಲಾಯಿತು. ಈ ಲಸಿಕಾಕರಣದಲ್ಲಿ ಒಟ್ಟು 145 ಫಲಾನುಭವಿಗಳು ಲಸಿಕೆ ಪಡೆದರು. ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಪ್ರಾಚಾರ್ಯ
ಡಾ. ಬಿ. ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಎನ್.ಕೆ. ಕಾಳಪ್ಪ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆರ್.ಜಿ. ಗೀತಾಲಕ್ಷ್ಮಿ, ಡಾ. ಅಶ್ವಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.