ಮುಖ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ : ರಾಜೀನಾಮೆ

ಮಲೇಬೆನ್ನೂರು, ಜ.20- ಇಲ್ಲಿನ ಪುರಸಭೆಯ 17ನೇ ವಾರ್ಡ್‌ ಸದಸ್ಯ ಬಿ. ಸುರೇಶ್‌ ಪುರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿರುವ ಸುರೇಶ್‌, ನನ್ನ ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿಗಳ ಏಕ ಪಕ್ಷೀಯ ನಿರ್ಧಾರದಿಂದ ಬೇಸತ್ತು ಮತ್ತು ಸದಸ್ಯರನ್ನು ಯಾವುದಕ್ಕೂ ವಿಶ್ವಾಸ ತೆಗೆದುಕೊಳ್ಳದೇ ಅಗೌರವದಿಂದ ನಡೆದು ಕೊಳ್ಳುತ್ತಿರುವು ದನ್ನು ಖಂಡಿಸಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಸುರೇಶ್‌ ತಿಳಿಸಿದ್ದಾರೆ.

error: Content is protected !!