ಧನ್ಯೋಸ್ಮಿ ಭರತ ಭೂಮಿ ಸಂಘಟನೆಯಿಂದ ತುಂಗಭದ್ರಾ ನದಿ ಸ್ವಚ್ಛತಾ ಆಂದೋಲನ

ಹರಿಹರ, ಜ.18- ಧನ್ಯೋಸ್ಮಿ ಭರತ ಭೂಮಿ ಸಂಘಟನೆಯ ವತಿಯಿಂದ ಕಾರ್ಯಕರ್ತರೆಲ್ಲ ಸೇರಿ ಕುಮಾರಪಟ್ಟಣದ ವಿದ್ಯಾನಗರ ಬಳಿ ತುಂಗಭದ್ರಾ ನದಿ ದಡದಲ್ಲಿ ಸ್ವಚ್ಚತಾ ಆಂದೋಲನ ಕೈಗೊಳ್ಳಲಾಗಿತ್ತು. ಪಂಚಾಯಿತಿ ಅಧ್ಯಕ್ಷ ಚೇತನ್ ಪೂಜಾರ್‌ ಸ್ವಚ್ಚತಾ ಆಂದೋಲನಕ್ಕೆ ಚಾಲನೆ ನೀಡಿದರು. 

ಸಂಘಟನೆಯ ಅಧ್ಯಕ್ಷ ಚರಣರಾಜ ಅಂಗಡಿ ಮಾತನಾಡಿ, ಪ್ರತಿ ಭಾನುವಾರ ಒಂದಿಲ್ಲೊಂದು ಸಂಘಟನೆಗಳು ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡಿದುದರ ಫಲವಾಗಿ ಈ ಬಾರಿ ಕಸ ಕಡ್ಡಿ ಹಳೇಯ ಬಟ್ಟೆ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳು ಅಷ್ಟಾಗಿ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟರು. ಸಾರ್ವಜನಿಕರು ಹೀಗೆಯೇ ಪರಿಸರ ಸ್ವಚ್ಚತೆಗೆ ಕೈ ಜೋಡಿಸಿದಲ್ಲಿ ನದಿ ತಟದಲ್ಲಿ ತ್ಯಾಜ್ಯ ಸಂಗ್ರಹಣೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಮಿಥುನ ಕಟವಟೆ ಮಾತನಾಡಿ, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಇನ್ನೂ ಹೆಚ್ಚು ಮೂಡಬೇಕಿದೆ. ಆಗ ಮಾತ್ರ ಸ್ವ-ಇಚ್ಚೆಯಿಂದ ಕಂಡ ಕಂಡಲ್ಲಿ ಕಸ, ಇತರೆ ವಸ್ತುಗಳನ್ನು ಚೆಲ್ಲುವುದನ್ನು ನಿಲ್ಲಿಸಬಹುದು. ಪರಿಸರ ಸ್ವಚ್ಚತೆಯಿಂದ ಸೊಳ್ಳೆಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದರು. 

ನದಿ  ತಟದಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಗ್ರಾಮ ಪಂಚಾಯತಿ ವಾಹನಕ್ಕೆ ತುಂಬಿಸಲಾಯಿತು. ಪರಿಸರ ಪ್ರೇಮಿ ಡಾ.ಜಿ.ಜೆ. ಮೆಹೆಂದಳೆ, ವಿಜಯ್ ಕೆ. ಬಾತಿ, ಮಿಥುನ ಕಟವಟೆ, ಗುರುಪ್ರಸಾದ್ ಅನ್ವೇರಿ, ಅನೂಪ ಪೂಜಾರ್, ವಿಜಯಕುಮಾರ್ ಉದಗಟ್ಟಿ, ಸಿದ್ದೇಶ್ ಕುಂಬಾರ್, ಗದಿಗೇಶ್ ಅಂಗಡಿ, ಹರ್ಷ ಆರ್.ಆರ್, ಮಧು ಚಳಗೇರಿ, ನಾಗರಾಜ್ ಕುಂಬಾರ, ಗದಿಗೇಶ್, ಅಜಯ್ ಮತ್ತು ಇತರರು ಪಾಲ್ಗೊಂಡಿದ್ದರು.

error: Content is protected !!