ಕರಾಟೆ ಪಟುಗಳಿಗೆ ಬಂಗಾರದ ಪದಕ

ರಾಣೇಬೆನ್ನೂರು, ಜ.15- ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್‌ ವತಿಯಿಂದ ಇತ್ತೀಚೆಗೆ ಆನ್‌ಲೈನ್ ಕಟಾ ಸ್ಪರ್ಧೆಯು 6ನೇ ಓಪನ್‌ ಗೋವಾ ಇಂಟರ್‌ನ್ಯಾಷನಲ್ ಚಾಂಪಿಯನ್‌ ಶಿಪ್‌ ಅನ್ನು ವರ್ಲ್ಡ್‌ ಫುಲಾಕೋಶಿ ಷೋಟೋಕಾನ್ ಕರಾಟೆ ಆರ್ಗನೈಸೇಷನ್ ಆಯೋಜಿಸಿದ್ದು ಸ್ಪರ್ಧೆಯಲ್ಲಿ  ಭಾಗವಹಿಸಿದ್ದ ನಗರದ ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಮಕ್ಕಳು ಸಾಧನೆ ತೋರಿದ್ದಾರೆ.

ಸುಮಾರು 22 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಕ್ಲಬ್‌ನ ಮಕ್ಕಳಾದ ಚಂದನಾ ಜಿ. ನಾಯಕ್, ಎಸ್. ಶರತ್, ಎಫ್.ಎಂ. ಹರ್ಷಾ, ಎಂ. ರುಚಿತಾ ಚಿನ್ನಿಕಟ್ಟಿ ಇವರು ಗೋಲ್ಡ್ ಮೆಡಲ್ ಪಡೆದು ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.

ಕ್ಲಬ್‌ನ ಪಾಲಕರಾದ ಗಂಗಾಧರ ನಾಯಕ್ (ಬಿಎಸ್‌ಎನ್‌ಎಲ್‌ ನಿವೃತ್ತರು), ಜೆಸಿ ಅಧ್ಯಕ್ಷ ಶಿವರುದ್ರಪ್ಪ, ಶಿಕ್ಷಕ ನಾಗರಾಜ್ ಚಿನ್ನಿಕಟ್ಟಿ, ಹೆಸ್ಕಾಂ ಜ್ಯೂನಿಯರ್ ಅಸಿಸ್ಟೆಂಟ್, ವೈ. ಫಕ್ಕೀರೇಶ ಮಡಿವಾಳರ, ಕ್ಲಬ್‌ನ ಮುಖ್ಯಸ್ಥರು ಹಾಗೂ ತರಬೇತುದಾರರಾದ ಶ್ರೇಯಾನ್ ವಿಜಯ ಅಗಡಿ ಹಾಜರಿದ್ದು ಸ್ಪರ್ಧಾಳುಗಳಿಗೆ ಪದಕ ಮತ್ತು ಪ್ರಮಾಣ ಪತ್ರ ವಿತರಿಸಿದರು.

error: Content is protected !!