ಮಲೇಬೆನ್ನೂರಿನಲ್ಲಿ ಸಿದ್ಧರಾಮ ಜಯಂತಿ ಆಚರಣೆ

ಪುರಸಭೆ ಅಧಿಕಾರಿಗಳ ನಿರ್ಲಕ್ಷಕ್ಕೆ ಸದಸ್ಯರಿಂದ ಖಂಡನೆ

ಮಲೇಬೆನ್ನೂರು, ಜ.14- ಇಲ್ಲಿನ ಪುರಸಭೆ ಮತ್ತು ನಾಡಕಛೇರಿಯಲ್ಲಿ ಕಾಯಕಯೋಗಿ ಶ್ರೀ ಗುರು ಸಿದ್ಧರಾಮೇಶ್ವರರ ಜಯಂತಿಯನ್ನು ಇಂದು ಆಚರಿಸಲಾಯಿತು.

ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷರಾದ ಶ್ರೀಮತಿ ನಾಹಿದಾ ಅಂಜುಂ ಸೈಯದ್‌ ಇಸ್ರಾರ್‌, ಉಪಾಧ್ಯಕ್ಷೆ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್‌, ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಉಪತಹಶೀಲ್ದಾರ್‌ ಆರ್‌. ರವಿ, ಪುರಸಭೆ ಸದಸ್ಯರಾದ ಬಿ. ಸುರೇಶ್‌, ದಾ ದಾವಲಿ ಮುಖಂಡರಾದ ಭೋವಿ ಕುಮಾರ್‌, ಭೋವಿ ಶಿವು, ಆದಾಪುರ ವಿಜಯಕುಮಾರ್‌, ಪಿ.ಆರ್‌. ರಾಜು ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪುಷ್ಪಾರ್ಚನೆ ಮಾಡಿದರು.

ನಿರ್ಲಕ್ಷ್ಯ ಆರೋಪ : ಶ್ರೀ ಗುರು ಸಿದ್ಧರಾಮೇಶ್ವರರ ಜಯಂತಿ ಆಚರಣೆ ಮಾಡಲು ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ, ಆಚರಣೆ ವಿಳಂಬ ಮಾಡಿದರೆಂದು ಪುರಸಭೆ ಉಪಾಧ್ಯಕ್ಷರಾದ ಅಂಜಿನಮ್ಮ ದೂರಿದರು.

ಪುರಸಭೆ ಅಧಿಕಾರಿಗಳು ದಾರ್ಶನಿಕರ ಜಯಂತಿ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಬಗ್ಗೆ ಪುರಸಭೆಯ ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಪುರಸಭೆೆ ಸದಸ್ಯ ಬಿ. ಸುರೇಶ್‌ ಬೇಸರ ವ್ಯಕ್ತಪಡಿಸಿದರು. 

ಇವತ್ತಿನ ಈ ಜಯಂತಿಯನ್ನು ಕಾಟಾಚಾರಕ್ಕೆ ಮಾಡಲಾಗಿದೆ ಎಂದು ಆರೋಪಿಸಿದರು.

error: Content is protected !!