ರಾಣೇಬೆನ್ನೂರು, ಜ.12- ಆರ್‌ಟಿಇ ಶುಲ್ಕ ಮರುಪಾವತಿ ತಂತ್ರಾಂಶವನ್ನು ದಿನಾಂಕ 4 ರಂದು ಬಿಡುಗಡೆ ಮಾಡಿದ್ದು, ಈ ಕುರಿತಂತೆ ಆರ್‌ಟಿಇ ನೋಡಲ್ ಅಧಿಕಾರಿ ಶ್ರೀಮತಿ ಡಿ.ಬಿ. ಸುನಿತಾ ಅವರು ಇಲ್ಲಿನ ಆರ್‌ಟಿಇಎಸ್ ಕಾಲೇಜಿನ ಸಭಾಂಗಣದಲ್ಲಿ ಖಾಸಗಿ ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಭಾಗವಹಿಸಿ, ಆರ್‌ಟಿಇ ತಂತ್ರಾಂಶ ಬಳಕೆ ಕುರಿತು ರಾಣೇಬೆನ್ನೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ.ಗುರುಪ್ರಸಾದ್ ಅವರು ಮಾಹಿತಿ ನೀಡಿದರು. ನೋಡೆಲ್ ಅಧಿಕಾರಿಗಳಾದ ಡಿ.ಬಿ.ಸುನಿತಾ ಮಾತನಾಡಿ, ಪ್ರಸ್ತುತ ಸಾಲಿನ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವುದು ಮತ್ತು ವಿಳಂಬಕ್ಕೆ ಅವಕಾಶ ನೀಡಬಾರದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಟಿಇಎಸ್ ಸಂಸ್ಥೆಯ ಮುಖ್ಯಸ್ಥ ಸುಭಾಷ್ ಸಾಹುಕಾರ್ ಹಾಗೂ ಶಿಕ್ಷಣ ಸಂಯೋಜಕ ಚಂದ್ರು ದೇವಾಂಗ ಹಾಜರಿದ್ದರು.