ಬಡವರಿಗೆ ಸೀರೆ, ಹೊದಿಕೆ, ಆಹಾರ ಧ್ಯಾನಗಳ ವಿತರಣೆ

ಹರಪನಹಳ್ಳಿ.ಜ.11- ಶ್ರೀ ಶಾರದಾ ಮಾತೆಯ 168ನೇ ಜಯಂತ್ಯೋ ತ್ಸವ ಪ್ರಯುಕ್ತ ಪಟ್ಟಣದ ಶ್ರೀ ಶಾರದಾದೇವಿ ಸತ್ಸಂಗ ಕೇಂದ್ರದ ಭಕ್ತರು ವಿಶೇಷ ಪೂಜೆ, ಹೋಮ, ಹವನಗಳನ್ನು ನೆರವೇರಿಸಿ ಬಡವರಿಗೆ ಸೀರೆ, ಹೊದಿಕೆ, ಆಹಾರ ಧ್ಯಾನಗಳನ್ನು ವಿತರಿಸಿದರು.

ಸ್ವಾಮಿ ಕರುಣಾನಂದಜೀ ಮಹಾರಾಜ್‍ ನೇತೃತ್ವದಲ್ಲಿ ಭಜನೆ, ಉಪನ್ಯಾಸ ಮಹಾಪ್ರಸಾದ ಕಾರ್ಯಕ್ರಮದ ನಂತರ ಜೀವಂತ ದುರ್ಗಾ ಪೂಜಾ ನಡೆಸಿದರು. ಬಡ ತಾಯಂದಿರನ್ನು ಗುರುತಿಸಿ ಸಾಕ್ಷಾತ್ ಜೀವಂತ ದುರ್ಗಿಯರು ಎಂದು ಭಾವಿಸಿ ಅವರಿದ್ದ ಸ್ಥಳಗಳಿಗೆ ಹೋಗಿ ಅಕ್ಕಿ, ಬೆಲ್ಲ, ಬೇಳೆ, ಸೀರೆಗಳನ್ನು ದಾನ ಮಾಡಿದರು. ಇನ್ನೂ ಮುಂದೆ ಅತೀ ಅವಶ್ಯವಿರುವ ತಾಯಂದಿರಿಗೆ ಔಷಧಿಯ ಸಹಾಯ ಮಾಡಲು ಪ್ರಯತ್ನಿ ಸಲಾಗುವುದು. ಒಟ್ಟು 60ಕ್ಕೂ ಹೆಚ್ಚು ತಾಯಂದಿರನ್ನು ಗುರುತಿಸಲಾಗಿದೆ ಎಂದು ಸ್ವಾಮಿ ಶಾರದೇಶಾನಂದ ಸತ್ಸಂಗದ ಭಕ್ತರು ಹೇಳಿದರು. 

ಸತ್ಸಂಗ ಕೇಂದ್ರದ ಅಂಬ್ಲಿ ಯೋಗೀಶ್, ಹೆಚ್.ಎಂ.ಶಶಿಧರ್, ಆರ್.ಪಿ.ಭದ್ರಶೆಟ್ಟಿ, ಸಹಕಾರ ನೀಡಿದ ರವಿಶಂಕರ್, ಶ್ರೀಧರ ಭೂತೆ ಹಾಗೂ ಇತರರು ಭಾಗವಹಿಸಿದ್ದರು.

error: Content is protected !!