ಕೊಟ್ಟೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಮಾಸ್ಕ್‍ ವಿತರಣೆ

ಕೊಟ್ಟೂರು, ಜ.11 – ಗಂಗಮ್ಮ ನಳ್ಳಿ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ ಕೊರಪ್ಪಳ ಇವರಿಂದ ಕೊಟ್ಟೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿದರು. `ಮಾಸ್ಕ್‍ ಧರಿಸಿ ಕೊರೊನಾ ಓಡಿಸಿ’ ಕಾರ್ಯಕ್ರಮದಡಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ವಿತರಿಸಿದ್ದಾರೆ. ಇವರ ಕಾರ್ಯವನ್ನು ಶಿಕ್ಷಕ ವೃಂದ ಅಭಿನಂದಿಸಿದೆ.

error: Content is protected !!