ದಾವಣಗೆರೆ, ಜ.10- ನಗರದ ವೀರಶೈವ ಪಂಚಮಸಾಲಿ ಮಹಿಳಾ ಘಟಕದ `ಸ್ನೇಹ ಕೂಟ’ದ ಸದಸ್ಯೆಯರಿಂದ ಹೊಸ ವರುಷ 2021 ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಸದಸ್ಯರಾದ ಶ್ರೀಮತಿ ಜ್ಯೋತಿ ರಾಧೇಶ್ ಜಂಬಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸದಸ್ಯೆಯರಿಗಾಗಿ ಆಟಗಳನ್ನು ಆಯೋಜಿಸಲಾಗಿತ್ತು.ಪಂಚಮಸಾಲಿಯ ಸದಸ್ಯರುಗಳಾದ ಶಶಿಕಲಾ ಶಿವಲಿಂಗಪ್ಪ, ಕೊಟ್ರಮ್ಮ ಮುರುಗೇಶ್, ಕುಸುಮಾ, ವಾಣಿ ರಶ್ಮಿ, ವೀಣಾ, ವಸಂತ, ಮಮತಾ, ರತ್ನಮ್ಮ, ಮಂಜುಳಾ ಮುರಿಗೆಮ್ಮ, ದೇವೀರಮ್ಮ, ದ್ರಾಕ್ಷಾಯಣಿ ಮತ್ತಿತರರು ಭಾಗವಹಿಸಿದ್ದರು.
January 24, 2025