ರಾಷ್ಟ್ರಮಟ್ಟದಲ್ಲಿ ಕರಾಟೆ ಪಟುಗಳ ಸಾಧನೆ

ದಾವಣಗೆರೆ, ಜ.8- ಜಿಲ್ಲೆಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಪ್ರಥಮ ರಾಜ್ಯಮಟ್ಟದ ಇ-ಕಥಾ ಆನ್‌ಲೈನ್ ಚಾಂಪಿಯನ್‌ಶಿಪ್‌-2020 ರಲ್ಲಿ ಗುರುಕುಲ ಮಾರ್ಷಲ್ ಆರ್ಟ್ಸ್ ಮತ್ತು ಸೆಲ್ಫ್ ಡಿಫೆನ್ಸ್ ಅಕಾಡೆಮಿಯ ಕರಾಟೆ ಪಟುಗಳು ಭಾಗವಹಿಸಿ ಸಾಧನೆ ತೋರಿದ್ದಾರೆ.

10 ವರ್ಷದೊಳಗಿನ (ಎ-ಬಿ) ವಿಭಾಗದಲ್ಲಿ ಅಫಿಸಿಯಾ ಫಾತಿಮಾ, ಅಕ್ಸಾ ಮಲ್ಲಿಕ್ ಕಂಚಿನ ಪದಕ, 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಫಿಯಾ ಬಂಗಾರ ಪದಕ, 12 ವರ್ಷದೊಳಗಿನ ವಿಭಾಗದಲ್ಲಿ ಜಿ.ಎಸ್. ಮೊಹಮ್ಮದ್ ಮಬಾರಕ್ ಬಂಗಾರ , 14 ವರ್ಷದ (ಎ,ಬಿ,ಸಿ) ವಿಭಾಗದಲ್ಲಿ ಅನುರಾಗ್ ಎಸ್. ಚಿನ್ಮಯ್‌ಗೌಡ, ಕೀರ್ತನ್ ಕೋಟೆ  ಬೆಳ್ಳಿ ಪದಕವನ್ನು ಪಡೆದಿದ್ದಾರೆ ಎಂದು ಮುಖ್ಯ ತರಬೇತುದಾರ ಅಬ್ದುಲ್ ಇಮ್ರಾನ್, ಸಹ ತರಬೇತುದಾರರಾದ ಎನ್.ವೆಂಕಟೇಶ್ ಹಾಗೂ ಕೃಷ್ಣ ತಿಳಿಸಿದ್ದಾರೆ.

error: Content is protected !!