ದಾವಣಗೆರೆ, ಜ.7- ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿ ಹೋಟೆಲ್‍ವೊಂದು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಇಲ್ಲಿನ ಶಾಮನೂರು ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ. ಮಿಥುನ್ ಎಂಬಾತನ ಮಾಲೀಕತ್ವದ ಕಳೆದ 20 ದಿನಗಳ ಹಿಂದಷ್ಟೆ ಪ್ರಾರಂಭವಾಗಿದ್ದ ಗೋಲ್ಡನ್ ಸ್ಪೂನ್ ಎಂಬ ಹೆಸರಿನ ಹೋಟೆಲ್‍ಗೆ ಬೆಂಕಿ ಹತ್ತಿಕೊಂಡಿದ್ದು, ನಂತರ ಹೋಟೆಲ್‍ನ ಎಲ್ಲೆಡೆ ಬೆಂಕಿ ಪಸರಿಸಿ ಹೊತ್ತಿ ಉರಿದಿದೆ. ಪರಿಣಾಮ ಲಕ್ಷಾಂತರ ರೂ. ನಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ಇಂದು ಹೋಟೆಲ್ ರಜಾ ಮಾಡಿ ಬೀಗ ಹಾಕಿದ್ದರಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
February 7, 2025