ರಾಣೇಬೆನ್ನೂರು, ಜ.6- ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲದ ಶಾಲಾವರಣದಲ್ಲಿ ವಿದ್ಯಾಗಮ-2 ಯೋಜನೆಗೆ ಮೇಡ್ಲೇರಿ ವಲಯದ ಶಿಕ್ಷಣ ಸಂಯೋಜಕ ಬಿ.ಕೆ.ಅಶೋಕ್ ಅವರು ವಿದ್ಯಾರ್ಥಿಗಳಿಗೆ ಹೂ ನೀಡುವುದರ ಮುಖಾಂತರ ಚಾಲನೆ ನೀಡಿದರು.
ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಾವಿಕಟ್ಟಿ ಥರ್ಮಲ್ ಸ್ಕ್ಯಾನರ್ ಮುಖಾಂತರ ಪರೀಕ್ಷೆ ಮಾಡಿ, ವಿದ್ಯಾರ್ಥಿಗಳ ಆರೋಗ್ಯದ ಸ್ಥಿರತೆಯನ್ನು ಪರೀಕ್ಷಿಸಿದರು. ಶಾಲೆಯ ಎಲ್ಲಾ ಸಹ ಶಿಕ್ಷಕರು ದೀರ್ಘ ಕಾಲದ ನಂತರ ಭೇಟಿಯಾದ ವಿದ್ಯಾರ್ಥಿ ಗಳೊಂದಿಗೆ ಭಾವನಾತ್ಮಕವಾಗಿ ಮಾತನಾಡಿದರು. ಸಹ ಶಿಕ್ಷಕರಾದ ಶಿವಯ್ಯ ಹಿರೇಮಠ, ರೇಖಾ.ಸಿ, ರೇಣುಕಮ್ಮ ಎಸ್, ದೇವರಾಜ ಮಲ್ಲಾಪುರ ಹಾಜರಿದ್ದರು.