ಹರಪನಹಳ್ಳಿ, ಜ.6- ರಾಜ್ಯ ಸರ್ಕಾರ, ಬಿಸಿ ಯೂಟ ತಯಾರಕರಿಗೆ ಕಳೆದ 4-5 ತಿಂಗಳುಗಳಿಂದ ವೇತನ ನೀಡದೆ ವಿಳಂಬ ಮಾಡುತ್ತಿದ್ದು, ಶೀಘ್ರವೇ ವೇತನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಬಿಸಿಯೂಟ ತಯಾರಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಎ.ಐ.ಟಿ.ಯು.ಸಿ. ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕಳೆದ 18 ವರ್ಷಗಳಿಂದ ನಿರಂತರ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಯೂಟ ತಯಾರಿಸುತ್ತಾ ಬಂದಿದ್ದು, ಸರ್ಕಾರ ಪ್ರತಿ ತಿಂಗಳ ವೇತನ ನೀಡದೆ ವಿಳಂಬ ಮಾಡುತ್ತಲೇ ಬಂ ದಿದೆ. ನಮ್ಮನ್ನೇ ನಂಬಿರುವ ಕುಟುಂಬದ ಗತಿ ಏನು? ಸರ್ಕಾರ ಹಾಗೂ ಸಂಬಂ ಧಪಟ್ಟ ಅಧಿಕಾರಿಗಳು ಕೂಡಲೇ ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು. ಎಐಎಸ್‍ಎಫ್ ಮುಖಂಡ ಬಳಿಗಾನೂರು ಕೊಟ್ರೇಶ್, ಅಧ್ಯಕ್ಷೆ ಪುಷ್ಪಾ, ವಿಶಾಲಮ್ಮ, ಸರೋಜಮ್ಮ, ಮಂಜುಳಾ, ಜಯಮ್ಮ, ಈರಮ್ಮ, ಕೆಂಚಮ್ಮ, ಹನುಮಕ್ಕ, ರೇಣುಕ, ಲಲಿತವ್ವ, ವಿದ್ಯಾ, ಫಕ್ಕೀರಮ್ಮ ಇನ್ನಿತರರಿದ್ದರು.