ದಾವಣಗೆರೆ, ಜ. 5- ನಗರ ಪಾಲಿಕೆ ವ್ಯಾಪ್ತಿಯ 21 ನೇ ವಾರ್ಡ್ ಬಸಾಪುರದಲ್ಲಿ ಮಂಗಳವಾರ ನಡೆದ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಗೆ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರು ಆಗಮಿಸಿ, ಸ್ವಾಮಿಯ ಆಶೀರ್ವಾದ ಪಡೆದರು. ಈ ವರ್ಷ ಕೋವಿಡ್‌ನಿಂದಾಗಿ ಮಹೇಶ್ವರ ಸ್ವಾಮಿ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡ ಕಿತ್ತೂರು ಜಯಣ್ಣ, ಗ್ರಾಮದ ಕೆ.ಎಲ್. ಹರೀಶ್, ರುದ್ರಯ್ಯ, ಹನುಮಂತಪ್ಪ, ರಾಜೇಶ್ ನಿವೃತ್ತ ಪೊಲೀಸ್ ಪೇದೆ ಹಾಲಪ್ಪ ಇದ್ದರು.
January 16, 2025