ಹರಿಹರ, ಜ.5- ನಗರದ ತುಂಗಭದ್ರಾ ನದಿಯ ದಂಡೆಯ ಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಬೆಳಿಗ್ಗೆ ಮಹೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರದಲ್ಲಿ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಗೌಡ್ರು ಮಲ್ಲೇಶಪ್ಪ, ಟಿ.ಜೆ. ಮುರುಗೇಶಪ್ಪ, ಜಿ.ಕೆ. ವೀರಣ್ಣ, ಕಂಚಿಕೇರಿ ಕರಿಬಸಪ್ಪ, ಈಶ್ವರ ಗೌಡಗೇರಿ, ಮಹೇಂದ್ರ, ಶೇಖರ್ ಗೌಡ ಇತರರು ಹಾಜರಿದ್ದರು.
January 17, 2025