ಅಂಗವಿಕಲರ ಗುರುತಿನ ಚೀಟಿ ನೋಂದಣಿ ಅಭಿಯಾನ

ದಾವಣಗೆರೆ, ಜ.5- ಪರಿಷ್ಕೃತ ಅಂಗವಿಕಲರ ಕಾಯ್ದೆ 2016 ಅಡಿಯಲ್ಲಿ ಹಿಮೋಫಿಲಿಯಾ ರಕ್ತಸ್ರಾವ ರೋಗವು  ಸೇರಿಸಿದ ನಂತರ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ ನೋಂದಣಿ ಅಭಿಯಾನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಹಿಮೋಫಿಲಿಯಾ ಸೊಸೈಟಿ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್ ಉದ್ಘಾಟಿಸಿ, ಹಿಮೋಫಿಲಿಯಾ ರೋಗಿಗಳ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಕಾರ್ಯಕ್ರಮವನ್ನು ಅಭಿನಂದಿಸಿದರು. ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರು ಹಾಗೂ ಸೊಸೈಟಿ ಅಧ್ಯಕ್ಷರು, ರಾಜ್ಯ ಅಂಗವಿಕಲರ ಆಯುಕ್ತರಿಗೆ ಸಲಹೆಗಾರರೂ ಆದ ಡಾ. ಸುರೇಶ ಹನಗವಾಡಿ ಅವರು ಸ್ವಾಗತಿಸಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಶಶಿಧರ್ ಮಾತನಾಡಿ, ಸರ್ಕಾರದ ಸೌಲಭ್ಯಗಳ ಮಾಹಿತಿ ನೀಡಿದರು. ಜಿಲ್ಲಾ ಧೀಕ್ಷಕ ಡಾ. ಜಯಪ್ರಕಾಶ್, ನಿವಾಸಿ ವೈದ್ಯರಾದ ಡಾ. ಮಂಜುನಾಥ್ ವೈ. ಪಾಟೀಲ್ ಸಹಕಾರದಲ್ಲಿ ವೈದ್ಯರುಗಳಾದ ಡಾ. ನಂದಕುಮಾರ್, ಕೀಲು ಮೂಳೆ ತಜ್ಞ ಡಾ. ಲೋಹಿತ್, ಮಕ್ಕಳ ತಜ್ಞ ಡಾ. ಹೇಮಂತ್,  ಹಿಮೋಫಿಲಿಯಾ ಬಾಧಿತರನ್ನು ತಪಾಸಣೆ ಮಾಡಿ ನೋಂದಾಯಿಸಿದರು. ದುರ್ಗೇಶ್ ಹಾಗೂ ಬಸವರಾಜ್ ನೋಂದಣಿ ಕಾರ್ಯ ನಿರ್ವಹಿಸಿದರು.

ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಮೀರಾ ಹನಗವಾಡಿ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಹವಳಿ, ವ್ಯವಸ್ಥಾಪಕ ಮಹಂತೇಶ್ ನಾಯಕ್, ಲ್ಯಾಬೋರೇಟರಿ ತಂತ್ರಜ್ಞ ಕೆ. ಮಂಜುನಾಥ್, ಹಿಮೋಫಿಲಿಯಾ ಬಾಧಿತ ಯುವಕರಾದ ದರ್ಶನ್, ಮೈನುದ್ದೀನ್, ಮುರಳಿ ಇನ್ನಿತರರಿದ್ದರು.

error: Content is protected !!