ಮಠ-ಮಾನ್ಯಗಳು ಶಾಂತಿ ಕೇಂದ್ರಗಳು

ಹೊನ್ನಾಳಿ ಜ.5 – ಮಠ-ಮಾನ್ಯ ಗಳು ಶಾಂತಿ-ನೆಮ್ಮದಿಯ ಕೇಂದ್ರಗಳು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾಸಡಿ ಗ್ರಾಮದಲ್ಲಿ ಸೋಮವಾರ ಶ್ರೀ ಮಹೇಶ್ವರ ಸ್ವಾಮಿ ಮಠವನ್ನು ಲೋಕಾರ್ಪಣೆಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮನುಷ್ಯ ಅಗಾಧ ಸಾಧನೆ ಮಾಡಿದ್ದಾನೆ. ಆದರೆ, ತನ್ನ ಬದುಕಿನಲ್ಲಿ ಶಾಂತಿ-ನೆಮ್ಮದಿ ಕಂಡುಕೊಳ್ಳಲು ವಿಫಲನಾಗಿದ್ದಾನೆ. ಆದ್ದರಿಂದ, ಧಾರ್ಮಿಕ ಶ್ರದ್ಧಾ ಕೇಂದ್ರಗಳು, ದೇವಸ್ಥಾನಗಳು, ಗುರುಗಳ ಸನ್ನಿಧಿಗೆ ತೆರಳಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಮಾಸಡಿ ಗ್ರಾಮದ ವತಿಯಿಂದ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಯನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತದೆ. ಸುತ್ತ-ಮುತ್ತಲಿನ ಗ್ರಾಮಸ್ಥರೆಲ್ಲರೂ ಇಲ್ಲಿಗೆ ಆಗಮಿಸಿ, ಶಿವನ ಕೃಪೆಗೆ ಪಾತ್ರರಾ ಗುತ್ತಿದ್ದಾರೆ. ಗ್ರಾಮದಲ್ಲಿದ್ದ ಮಹೇಶ್ವರ ಸ್ವಾಮಿ ಹಳೆಯ ಮಠದ ಬದಲಿಗೆ ಹೊಸ ಮಠವನ್ನು ಗ್ರಾಮಸ್ಥ ರೆಲ್ಲರೂ ಒಗ್ಗಟ್ಟಿನಿಂದ ನಿರ್ಮಿಸಿ ರುವುದು ಗ್ರಾಮದ ಐಕ್ಯತೆಯನ್ನು ಬಿಂಬಿಸುತ್ತದೆ. ಇದೇ ರೀತಿ ಎಲ್ಲಾ ಗ್ರಾಮಸ್ಥರೂ ಭಾವೈಕ್ಯತೆಯಿಂದ ಬಾಳ್ವೆ ನಡೆಸಬೇಕು ಎಂದು ಸೂಚಿಸಿದರು.

ಶ್ರೀ ಮಹೇಶ್ವರಸ್ವಾಮಿ ಮಠದ ಮಹೇಶ್ವರಯ್ಯ ಸ್ವಾಮಿ, ಎಪಿಎಂಸಿ ನಿರ್ದೇಶಕ ಎಂ.ಎಚ್. ಗಜೇಂದ್ರಪ್ಪ, ಮಾಸಡಿ ಗ್ರಾಪಂ ಸದಸ್ಯರಾದ ಸಿ.ಎಚ್. ಅಶೋಕ್, ಮಮತಾ ಎನ್.ಪಿ. ನಾಗಪ್ಪ, ಲಕ್ಷ್ಮಮ್ಮ ಭರಮಪ್ಪ, ನೇತ್ರಾವತಿ ನಾಗ ರಾಜ್, ಮುಖಂಡರಾದ ಪಿ. ಗದಿಗೆಪ್ಪ, ನಾರಾಯಣಪ್ಪ, ಸತೀಶ್, ಕೆ.ಟಿ. ಸುರೇಶ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!