ದಾವಣಗೆರೆ, ಜ.4- ಜಲಸಿರಿ ಯೋಜನೆಯಡಿ ಯಲ್ಲಿ ಹೊಸಚಿಕ್ಕನಹಳ್ಳಿಯಲ್ಲಿ ನೀರು ಶೇಖರಣೆ ಟ್ಯಾಂಕ್ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಾಸಕ ಎಸ್.ಎ. ರವೀಂದ್ರನಾಥ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ 30ನೇ ವಾರ್ಡ್ ಪಾಲಿಕೆ ಸದಸ್ಯರೂ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಶ್ರೀಮತಿ ಜಯಾಬಾಯಿ ಗೋಪಿನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಸನ್ನ ಕುಮಾರ್, ಎಸ್.ಟಿ. ವೀರೇಶ್, ನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಜಿ. ಉಮೇಶ್ ಆವರಗೆರೆ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಬಿ.ಮಲ್ಲಾಪುರ, ಜಲಸಿರಿ ಯೋಜನೆಯ ಎಕ್ಸಿಕ್ಯೂ ಟಿವ್ ಇಂಜಿನಿಯರ್ ರವಿಕುಮಾರ್, ದಾವಣ ಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂಗನಗೌಡ್ರು ಬೇತೂರು, ಶಂಕರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಉಚಿತವಾಗಿ ನಿವೇಶನ ನೀಡಿದ ದಾನಿಗಳಾದ ಶ್ರೀಮತಿ ಸುಂಕಮ್ಮ ದೇವರಮನೆ ರೇವಣಸಿದ್ದಪ್ಪ ಅವರುಗಳನ್ನು ಸನ್ಮಾನಿಸಲಾಯಿತು.