ದಾವಣಗೆರೆ, ಡಿ.31- ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. 2ನೇ ವಾರ್ಷಿಕ ಮಹಾಸಭೆಯನ್ನು ಕರಾವಳಿ ಸೌಹಾರ್ದ ಸಹಕಾರಿಯ ಕಟ್ಟಡದಲ್ಲಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಹೆಚ್.ಎಂ. ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ಹಾಜರಿದ್ದ ಸಹಕಾರಿಗಳ ಪ್ರತಿನಿಧಿಗಳು ಮಾತನಾಡಿ, ಜಿಲ್ಲಾ ಒಕ್ಕೂಟವು ಸ್ವಂತ ಕಚೇರಿ ಹೊಂದಬೇಕು ಹಾಗೂ ಈವರೆಗೂ ಸದಸ್ಯತ್ವ ಪಡೆಯದ ಸೌಹಾರ್ದ ಸಹಕಾರಿಗಳನ್ನು ಸಂಪರ್ಕಿಸಿ, ಸದಸ್ಯತ್ವ ಪಡೆಯಬೇಕು ಹಾಗೂ ಒಕ್ಕೂಟದ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಇತ್ಯಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಸಿ.ಎ. ಉಮೇಶ್ ಶೆಟ್ಟಿ, ನಿರ್ದೇಶಕರುಗಳಾದ ಎಸ್.ಎಂ. ವೀರಯ್ಯ, ಜಿ.ಎಂ. ರುದ್ರೇಗೌಡ, ಕೆ.ಎಂ. ರವಿಶಂಕರ್, ಕೆ.ಹೆಚ್. ಶಿವಯೋಗಪ್ಪ, ಟಿ.ಎಂ. ಪಾಲಾಕ್ಷ, ಎನ್.ಬಿ. ವಿಜಯ ಕುಮಾರ್ ಹಾಗೂ ವಿವಿಧ ಸದಸ್ಯ ಸಹಕಾರಿಗಳ ಅಧ್ಯಕ್ಷರು ಹಾಗೂ ಸಂಯುಕ್ತ ಸಹಕಾರಿ ಜಿಲ್ಲಾ ಸಂಯೋಜಕ ನಟರಾಜ್ ಭಾಗವಹಿಸಿದ್ದರು.