ದಾವಣಗೆರೆ ಜ. 3 – ಆವರಗೊಳ್ಳದ ಪುರವರ್ಗ ಮಠದ ವಿಷಮರ್ಧನ ಸಂಜೀವಿನಿ ಗದ್ದುಗೆಯ 47 ನೇ ವಾರ್ಷಿಕೋತ್ಸವದ ಅಂಗವಾಗಿ ರಂಭಾಪುರಿ ಜಗದ್ಗುರು ಲಿಂ. ವೀರಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ತ ಲಿಂ ಜಗದ್ಗುರುಗಳ ಭಾವಚಿತ್ರದ ಅಡ್ಡಪಲ್ಲಕ್ಕಿ ಉತ್ಸವ ಇಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ 75 ವಟು ಗಳಿಗೆ ಶಿವದೀಕ್ಷೆ ನಡೆಯಿತು, ಈ ಸಂದರ್ಭ ದಲ್ಲಿ ಸಾಂಕೇತಿಕವಾಗಿ ಒಂದು ಜೋಡಿಯ ವಿವಾಹ ಮಹೋತ್ಸವವೂ ನೆರವೇರಿತು.
ಗ್ರಾಮ ಪಂಚಾಯಿತಿಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳ ಸಾನಿಧ್ಯವನ್ನು ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದ ಅಂಗವಾಗಿ ನಿನ್ನೆ ರಾತ್ರಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಕಾರ್ತಿಕ ದೀಪೋತ್ಸವ ಜರುಗಿತು.