ಜಿಗಳಿ : ಸಂಭ್ರಮದ ಶಾಲಾ ಪ್ರಾರಂಭೋತ್ಸವ

ಮಲೇಬೆನ್ನೂರು, ಜ.1- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6, 7 ಮತ್ತು 8 ನೇ ತರಗತಿಗಳನ್ನು ಶುಕ್ರವಾರ ಸರ್ಕಾರದ ಆದೇಶದಂತೆ ನಿಯಮಗಳನ್ನು ಪಾಲಿಸಿ ಸಂಭ್ರಮದಿಂದ ಆರಂಭಿಸಲಾಯಿತು.

ಸತತ 7 ತಿಂಗಳ ನಂತರ ಪ್ರಾರಂಭವಾದ ಶಾಲೆಯ ತರಗತಿ ಕೊಠಡಿಗಳನ್ನು ಸ್ವಚ್ಛಗೊಳಿಸಿ, ಹಸಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು.

ಮೊದಲ ದಿನವಾದ ಇಂದು 3 ತರಗತಿಗಳಿಗೂ ಸೇರಿ ಒಟ್ಟು 40 ವಿದ್ಯಾರ್ಥಿಗಳು ಆಗಮಿಸಿದ್ದರು. ಆಶಾ ಕಾರ್ಯಕರ್ತೆಯರಾದ ವನಜಾಕ್ಷಮ್ಮ, ಮಂಜುಳಾ, ಲತಾ, ಶಂಕರಮ್ಮ ಅವರು ವಿದ್ಯಾರ್ಥಿಗಳಿಗೆ ಸ್ಯಾನಿಟೈಜ್‌ ಹಾಗೂ ಜ್ವರ ತಪಾಸಣೆ ಮಾಡಿ ತರಗತಿಗಳಿಗೆ ಕಳುಹಿಸಿಕೊಟ್ಟರು. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿ ಶಾಲೆಗೆ ಆಗಮಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್‌. ಚಂದ್ರಪ್ಪ, ಉಪಾಧ್ಯಕ್ಷೆ ರಶ್ಮಿ ವಿಜಯಭಾಸ್ಕರ್‌, ಸದಸ್ಯರಾದ ಕೆ.ಎಸ್‌. ಮಾಲತೇಶ್, ಡಿ.ಪಿ. ಚಿದಾನಂದ್‌, ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ, ಶಿಕ್ಷಕರಾದ ನಾಗೇಶ್‌, ಮಲ್ಲಿಕಾರ್ಜುನ್‌, ಲೋಕೇಶ್‌, ಗುಡ್ಡಪ್ಪ, ಲಿಂಗರಾಜ್‌, ಜಯಶ್ರೀ, ವೀಣಾ, ಗೀತಾ ಅವರುಗಳು ಹಾಜರಿದ್ದು, ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದರು.

error: Content is protected !!