ಚಿತ್ರದುರ್ಗ, ಫೆ. 16 – ಜೈನ ಗುರುಗಳಾದ ಥಾಣೆಯ ಸಾದ್ವಿ ಶ್ರೀ ಪ್ರಮೀಳಾ ಕುಮಾರಿಜಿ, ಆಸ್ತಾ ಶ್ರೀಜಿ, ವಿಘ್ಯಾ ಪ್ರಭಾಜಿ ನಗರದ ಮುರುಘಾ ಮಠಕ್ಕೆ ಆಗಮಿಸಿ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿ ಜೈನಧರ್ಮ ಹಾಗು ವಿವಿಧ ಧರ್ಮಗಳ ನಡುವಿನ ಧಾರ್ಮಿಕ ಸಮನ್ವಯತೆ ಮತ್ತು ಪ್ರಸ್ತುತ ಬೆಳವಣಿಗೆ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ತೇರಾಪಂಥ್ ಅಧ್ಯಕ್ಷ ಬಾಬುಲಾಲ್ ಬಾಫ್ನಾ, ವಿನೋದ್ ಬಾಫ್ನಾ, ಲಲಿತ್ ಬಾಫ್ನಾ, ಅರವಿಂದ್ ಬಾಫ್ನಾ, ರಾಜೇಶ್ ಕೊಠಾರಿ ಉಪಸ್ಥಿತರಿದ್ದರು.
January 8, 2025